ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅಭಿನಯದ ‘ಲೊಡ್ಡೆ’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಯು/ಎ’ ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಜುಲೈ ತಿಂಗಳಿನಲ್ಲಿ ಬಿಡುಗಡೆ ಎಂದು ನಿರ್ದೇಶಕ ಸುರೇಶ್ ರಾಜ್ ಅವರು ತಿಳಿಸಿದ್ದಾರೆ.
‘ಲೊಡ್ಡೆ’ ಆಲ್ ವೇಸ್ ರೈಟ್ ಎಂಬ ಅಡಿ ಬರಹ ಹೊತ್ತಿರುವ ಚಿತ್ರ ಎಂ ಎಸ್ ಶ್ರೀನಾಥ್ ಅವರ ಕಥೆ ಒಳಗೊಂಡಿದೆ, ಎಸ್ ವಿ ಸುರೇಶ್ (ಸುರೇಶ್ ರಾಜ್) ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ. ಉಲ್ಲಾಸ್ ಸಿನಿಮಾಸ್ ಅಡಿಯಲ್ಲಿ ಮಂಜುನಾಥ್ ಅವರು ನಿರ್ಮಾಣ ಮಾಡಿರುವ ಚಿತ್ರ. ಟಿ ಆರ್ ಯೋಗೀಶ್ ಸಿನಿಮಾದ ಸಹ ನಿರ್ಮಾಪಕರು.
ಈ ಚಿತ್ರದಲ್ಲಿ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ ಅವರ ನೆನಪಿಗೆ ಒಂದು ಹಾಡನ್ನು 35 ಲಕ್ಷ್ ವೆಚ್ಚದಲ್ಲಿ ಅನಿಮೇಷನ್ ತಂತ್ರಜ್ಞಾನವನ್ನು ಬಳಸಿ ತೆರೆಯ ಮೇಲೆ ತರಲಾಗಿದೆ.
ಚರಣ್ ಬಾಂಜೊ ಸಂಗೀತ, ಸೇಫ್ಟೀ ಪ್ರಕಾಶ್ ಅವರ ಛಾಯಾಗ್ರಹಣ,ತ್ರಿಭುವನ್, ಮುರಳಿ, ಧನ್ ಕುಮಾರ್ ಅವರ ನೃತ್ಯ ನಿರ್ದೇಶನ, ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಹೃದಯ ಶಿವ ಹಾಗೂ ಎಸ್ ವಿ ಸುರೇಶ್ ಅವರ ಗೀತೆಗಳು ಈ ಚಿತ್ರಕ್ಕೆ ಇದೆ.
ಕೋಮಲ್ ಕುಮಾರ್, ಆಕಾಂಕ್ಷ ಪುರಿ, ಶಯ್ಯಾಜಿ ಶಿಂದೆ, ಅವಿನಾಷ್, ಮುಖ್ಯಮಂತ್ರಿ ಚಂದ್ರು, ಕರಿ ಸುಬ್ಬು, ಮಿಮಿಕ್ರಿ ಗೋಪಿ, ಸುಚಿಂದ್ರ ಪ್ರಸಾದ್, ಆಶಾಲತಾ, ಲಕ್ಷ್ಮಿ ದೇವಮ್ಮ, ನವನೀತ, ಪವಿತ್ರ ಲೋಕೇಶ್, ಬೇಬೀ ಶಾನಿದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.